Nam Gani Bcom Pass I Director Abhishek Shetty Announces His Next Film GAJANANA AND GANG II ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್
ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್
An Exclusive update from Nam Gani Bcom Pass director Abhishek Shetty announcing there next film GAJANANA AND GANG are all set for shooting, But the team is waiting for the present COVID-19 situation to settle down.
ನಮ ಗಣಿ ಬಿಕಾಂ ಪಾಸ್, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ನ ನೀವು ಎಷ್ಟು ಜನ ಥೀಯೇಟರ್ ನಲ್ಲಿ ನೋಡಿದೀರೋ ಗೊತ್ತಿಲ್ಲ, ಆದರೆ ಅಮೆಜಾನ್ ಪ್ರೈಮ್ ಅಲ್ಲಿ ಬಂದಮೇಲೆ ಈ ಸಿನಿಮಾ ತಂಡದ ಅದೃಷ್ಟ ವೇ ಬದಲಾಯ್ತು , ಲೊಕ್ಡೌನ್ ಟೈಮ್ಹ ಅಲ್ಲಿ ಕನ್ನಡ ವೀಕ್ಷಕರು ಅತೀ ಹೆಚ್ಚು ನೋಡಿದ ಹತ್ತು ಸಿನೆಮಾಗಳಲ್ಲಿ ಇದೂ ಕೂಡ ಒಂದು. ಸಿನಿಮಾ ನೋಡಿದ ಎಲ್ಲರಿಂದ ಪ್ರಶಂಸೆಗಳ ಮಹಾಪೂರವೇ ಹರಿದಿತ್ತು, ಹೆಚ್ಚು ಕಮ್ಮಿ ಹೊಸಬರೇ ಕಷ್ಟ ಪಟ್ಟು ಸೃಷ್ಟಿಸಿದ ಈ ಚಿತ್ರ ಥೀಯೇಟರ್ ನಲ್ಲಿ ಅಷ್ಟು ಯಶಸ್ಸು ಕಾಣದೆ ಇನ್ನೇನು ಸಿನಿಮಾ ಕಾಯ್ಯಿಂದ ಬಿಡಿಸಿ ಕಳೆದುಹೋದ ಮಗುವಿನಂತಾಗಿದ್ದಾಗ ಅಮೆಜಾನ್ ಪ್ರೈಮ್ ಅನ್ನೋ ಆಪ್ತ ಮಿತ್ರ ಈ ತಂಡದ ಕೈ ಹಿಡಿದಿದ್ದ. ಅಷ್ಟಕ್ಕೂ ಒಳ್ಳೆ ಎಫರ್ಟ್ ಮತ್ತು ಟೀಮ್ ವರ್ಕ್ ಇರೋ ಸಿನಿಮಾ ಎಂದೂ ಸೋಲಲ್ಲ ಅನ್ನೋದಕ್ಕೆ ಇದೆ ಸಾಕ್ಷಿ.
ಚಿತ್ರದ ನಾಯಕ ಮತ್ತು ನಿರ್ದೇಶಕ ಅಭಿಷೇಕ್ ಶೆಟ್ಟಿ ಸಿನಿಮಾ ಮೋಕ್ಟ್ರೈಲ್ ತಂಡ ದ ಮೂಲಕ ತಮ್ಮ ಚಿತ್ರದ ಯಶಸ್ಸಿನ
ಬಗ್ಗೆ ಮನಸಿನ ಅನಿಸಿಕೆಗಳನ್ನ ಹೇಳಿಕೊಂಡಿದ್ದಾರೆ.
ಮೊದಲ ಗೆಲುವೇ ಮುಂದಿನ ಯಶಸ್ಸಿನ ಮೆಟ್ಟಿಲು ಅನ್ನೋ ಹಾಗೆ , ಮೊದಲ ಚಿತ್ರದ ಗೆಲುವಿನ ನಂತರ ಎರಡನೇ ಚಿತ್ರದ "ಗಜಾನನ ಅಂಡ್ ಗ್ಯಾಂಗ್" ಮೂಲಕ ನಮ್ಮಣ್ಣ ರಂಜಿಸಲು ಸಜ್ಜಾಗಿದ್ದಾರೆ. ಅಭಿಷೇಕ್ಎಕ್ಸ್ಕ್ಲೂಸಿವ್ ಆಗಿ ತಮ್ಮ ಮುಂದಿನ ಚಿತ್ರದ ತಯಾರಿಯ ಬಗ್ಗೆ ಸಿನಿಮಾ ಮೋಕ್ಟ್ರೈಲ್ ತಂಡದ ಜೊತೆ ಹಂಚಿಕೊಂಡಿದ್ದಾರೆ.
ಗ್ಯಾಂಗ್ ನ ಕಟ್ಕೊಂಡು ಸಿನಿಮಾ ಅನ್ನೋ ಸಮುದ್ರದಲ್ಲಿ ಈಜಲು ಹರಟಿರುವ ಅಭಿಷೇಕ್ ಮತ್ತು ತಂಡಕ್ಕೆ ಸಿನಿಮಾ ಮೋಕ್ಟ್ರೈಲ್ ತಂಡದಿಂದ ಆಲ್ ದಿ ಬೆಸ್ಟ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ