ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Aakasmika ಅಂದಿಗೂ ಇಂದಿಗೂ II One Of The Superhit Movie Directed By T S Nagabharana

ಇಮೇಜ್
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು, ಈ ಒಂದು ಹಾಡು ಜಗತ್ತಿನ ಮೂಲೆ ಮೂಲೆ ತಲುಪೋ ಹಾಗೆ ಮಾಡಿದ್ದು ೧೯೯೩ ರಲ್ಲಿ ಬಿಡುಗಡೆ ಆದ ವರನಟ ನಟಿಸಿ ಟಿ ಎಸ ನಾಗಾಭರಣ ನಿರ್ದೇಶಿಸಿದ  ಆಕಸ್ಮಿಕ ಚಿತ್ರದ ಮೂಲಕ  , ಈ ಹಾಡು ಇಂದಿಗೂ ಕನ್ನಡಿಗರ ಸ್ವಾಭಿಮಾನ ಮತ್ತು  ಭಾಷಾಭಿಮಾನದ ಸಂಕೇತವಾಗೇ ಉಳಿದಿದೆ. ಖ್ಯಾತ ಕಾದಂಬರಿಕಾರ ಶ್ರೀ ತಾ ರ ಸು ಅವರ ೩ ಕಾದಂಬರಿಗಳು ಸೇರಿ ಆಗಿದ್ದೆ ಆಕಸ್ಮಿಕ . ಡಾಕ್ಟರ್ ರಾಜ್ ಕುಮಾರ್ ಗೆ ಎಂಟನೇ ಫಿಲಂ ಫೇರ್ ಅವಾರ್ಡ್ ತಂದು ಕೊಟ್ಟ ಚಿತ್ರ ,  ಹಲವು ವರ್ಷಗಳ ಗ್ಯಾಪ್  ನ  ನಂತರ ರಾಜಕುಮಾರ್ ಈ ಚಿತ್ರದಲ್ಲಿ ನಟಿಸಿದ್ದರು ಹಾಗಾಗಿ ಈ ಚಿತ್ರ ಬಿಡುಗಡೆ ಆಗಿ ಯಶಸ್ವೀ  ೨೫ ವಾರಗಳನ್ನ ಪೂರಯ್ಸಿತ್ತು , ಆ ವಯಸ್ಸಿನಲ್ಲೂ ಅಭಿಮಾನಿಗಳಿಗೆ ರಂಜಿಸಿ ರಸದೌತಣ ನೀಡಿದ್ದ ದ್ರ್ ರಾಜ್ಕುಮಾರ್ ಅಭಿನಯ ಎಲ್ಲರನ್ನ ಮಂತ್ರ ಮುಗ್ದರಾಗಿಸಿತ್ತು , ಚಿತ್ರದ ಕಥೆ ಮತ್ತು ಚಿತ್ರ ಕಥೆ ಕೂಡ ನೋಡುಗನನ್ನ ಪ್ರತಿ ಪಾತ್ರಗಳೊಡನೆ ಬೆಸೆಯೋ ಹಾಗೆ ಮಾಡಿತ್ತು , ಅಂದು ಮಕ್ಕುಳು ದೊಡ್ಡವರೆನ್ನದೆ ಸಾಗರೋಪಾದಿಯಲ್ಲಿ ಜನ ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟದ್ದು ಯಾರೋ ಮರೆಯೋಲ್ಲ , ಹಂಸಲೇಖ ಸಂಗೀತ ಸಂಯೋಜನೆಯಎಲ್ಲ ಹಾಡುಗಳು ಚಿತ್ರದ ವೇಗಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. "ಆಗುಂಬೆಯ ಪ್ರೇಮ ಸಂಜೆ ಯಾ" ಹಾಡು ಅಂದಿನ ಯುವ ಪ್ರೇಮಿಗಳ ಅಚ್ಚು ಮೆಚ್ಚು . ಚಿತ್ರದ ಎಲ್ಲ ೫ ಹಾಡು...

Shhh ಅಂದಿಗೂ ಇಂದಿಗೂ II One of the Best Horror Suspense Thriller movie in Sandalwood

ಇಮೇಜ್
  ೧೯೯೩ ರಲ್ಲಿ ಬಿಡುಗಡೆ ಆದ ಕನ್ನಡ ದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶ್!!! . ಅಸಾಮಾನ್ಯ ಪ್ರತಿಭೆ ಉಪೇಂದ್ರ ನಿರ್ದೇಶನದ ಎರಡನೇ ಚಿತ್ರ , ಮೊದಲನೇ ಚಿತ್ರ ತರ್ಲೆ ನನ್ಮಗ ಯಶಸ್ಸಿನ ನಂತರ ಸಿಕ್ಕ ಅವಕಾಶವನ್ನ ತನ್ನ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಉಪ್ಪಿ Shhh ನ್ನ ತೆರೆಗೆ ತರುವಲ್ಲಿ ಹೊಸ ಪ್ರಯೋಗಗಳನ್ನ ಕನ್ನಡಿಗರ ಮುಂದಿಟ್ಟಿದ್ದರು , ಈ ಸಿನಿಮಾ ದ ಚಿತ್ರ ಕಥೆ ಗೆ ಅಂದಿನ ಎಷ್ಟೋ ಹಿರಿಯ ನಿರ್ದೇಶಕರುಗಳು ತಲೆ ಬಾಗಿದ್ದರು , ಅಲ್ಲಿವರೆಗೂ ಬೆರಳೆಣಿಕೆಯಷ್ಟೇ ಸೂಸ್ಪೆನ್ಸ ಥ್ರಿಲ್ಲರ್ ಜೊಂವ್ರ್ ನ ಸಿನಿಮಾ ಗಳು ಕನ್ನಡದಲ್ಲಿ ತೆರೆ ಕಾಣುತ್ತಿದ್ದವು. ಈ ಸಿನಿಮಾ ದ ಮೂಲಕ ಉಪೇಂದ್ರ ಹೊಸ ಟ್ರೆಏಂಡ್ ಅನ್ನ ಸೃಷ್ಟಿ ಮಾಡಿಬಿಟ್ಟರು. ಕುಮಾರ್ ಗೋವಿಂದ್ ನಿರ್ಮಾಣ ಮತ್ತು ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ. ಅಶೋಕ್ ಕಶ್ಯಪ್ ಛಾಯಾಗ್ರಹಣ ಕೂಡ ಈ ಸಿನಿಮಾ ದ ಪ್ಲಸ್ ಪಾಯಿಂಟ್. ಈ ಸಿನಿಮಾ ದಲ್ಲಿ  ಬಾರೋ  ಹೊರರೋರ್ ಸೀಕ್ವೆನ್ಸ್ ಗಳು ಮತ್ತು ಅದಕ್ಕೆ ತಕ್ಕನಾದ BGM ಗಳು  ಇಂದು ಕೂಡ  ನೋಡುಗರಿಗೆ ಥ್ರಿಲ್ ನೀಡುತ್ತದೆ , ಥ್ರಿಲ್ಲರ್ಸಾ ಮಂಜು ನಿರ್ದೇಶನದ ಸ್ಟಂಟ್ ಅಂದು ನೋಡುಗನಿಗೆ ಕೊಟ್ಟ ಕಿಕ್ ಅಂತಿಟ್ಟದ್ದಲ್ಲ. ಸಾಧು ಕೋಕಿಲ ಸಂಗೀತ ನಿರ್ದೇಶನದ ಮೊದಲ ಚಿತ್ರ  ಇದ್ದಾಗಿದ್ದು ಅವರು ಕೊಟ್ಟ ಎರಡು ಹಾಡುಗಳು ಇಂದಿಗೂ ಗುನುಗೋ ಮೆಲೊಡಿಗಳು . ಅದಾಗಲೇ ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ನಟ ನಿರ್ದೇಶಕರಾಗಿ ಬೆಳೆದು ನ...