Aakasmika ಅಂದಿಗೂ ಇಂದಿಗೂ II One Of The Superhit Movie Directed By T S Nagabharana

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು, ಈ ಒಂದು ಹಾಡು ಜಗತ್ತಿನ ಮೂಲೆ ಮೂಲೆ ತಲುಪೋ ಹಾಗೆ ಮಾಡಿದ್ದು ೧೯೯೩ ರಲ್ಲಿ ಬಿಡುಗಡೆ ಆದ ವರನಟ ನಟಿಸಿ ಟಿ ಎಸ ನಾಗಾಭರಣ ನಿರ್ದೇಶಿಸಿದ  ಆಕಸ್ಮಿಕ ಚಿತ್ರದ ಮೂಲಕ  , ಈ ಹಾಡು ಇಂದಿಗೂ ಕನ್ನಡಿಗರ ಸ್ವಾಭಿಮಾನ ಮತ್ತು  ಭಾಷಾಭಿಮಾನದ ಸಂಕೇತವಾಗೇ ಉಳಿದಿದೆ.

ಖ್ಯಾತ ಕಾದಂಬರಿಕಾರ ಶ್ರೀ ತಾ ರ ಸು ಅವರ ೩ ಕಾದಂಬರಿಗಳು ಸೇರಿ ಆಗಿದ್ದೆ ಆಕಸ್ಮಿಕ . ಡಾಕ್ಟರ್ ರಾಜ್ ಕುಮಾರ್ ಗೆ ಎಂಟನೇ ಫಿಲಂ ಫೇರ್ ಅವಾರ್ಡ್ ತಂದು ಕೊಟ್ಟ ಚಿತ್ರ ,  ಹಲವು ವರ್ಷಗಳ ಗ್ಯಾಪ್  ನ  ನಂತರ ರಾಜಕುಮಾರ್ ಈ ಚಿತ್ರದಲ್ಲಿ ನಟಿಸಿದ್ದರು ಹಾಗಾಗಿ ಈ ಚಿತ್ರ ಬಿಡುಗಡೆ ಆಗಿ ಯಶಸ್ವೀ  ೨೫ ವಾರಗಳನ್ನ ಪೂರಯ್ಸಿತ್ತು , ಆ ವಯಸ್ಸಿನಲ್ಲೂ ಅಭಿಮಾನಿಗಳಿಗೆ ರಂಜಿಸಿ ರಸದೌತಣ ನೀಡಿದ್ದ ದ್ರ್ ರಾಜ್ಕುಮಾರ್ ಅಭಿನಯ ಎಲ್ಲರನ್ನ ಮಂತ್ರ ಮುಗ್ದರಾಗಿಸಿತ್ತು , ಚಿತ್ರದ ಕಥೆ ಮತ್ತು ಚಿತ್ರ ಕಥೆ ಕೂಡ ನೋಡುಗನನ್ನ ಪ್ರತಿ ಪಾತ್ರಗಳೊಡನೆ ಬೆಸೆಯೋ ಹಾಗೆ ಮಾಡಿತ್ತು , ಅಂದು ಮಕ್ಕುಳು ದೊಡ್ಡವರೆನ್ನದೆ ಸಾಗರೋಪಾದಿಯಲ್ಲಿ ಜನ ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟದ್ದು ಯಾರೋ ಮರೆಯೋಲ್ಲ , ಹಂಸಲೇಖ ಸಂಗೀತ ಸಂಯೋಜನೆಯಎಲ್ಲ ಹಾಡುಗಳು ಚಿತ್ರದ ವೇಗಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. "ಆಗುಂಬೆಯ ಪ್ರೇಮ ಸಂಜೆ ಯಾ" ಹಾಡು ಅಂದಿನ ಯುವ ಪ್ರೇಮಿಗಳ ಅಚ್ಚು ಮೆಚ್ಚು . ಚಿತ್ರದ ಎಲ್ಲ ೫ ಹಾಡುಗಲ  ಸಾಹಿತ್ಯ ಶ್ರೀ ಸಾಮಾನ್ಯ ನಿಗೆ ನೇರವಾಗಿ ತಲುಪಿತ್ತು .ಕೆಟ್ಟ ದಂಧೆಗೆ ಒಂಟಿ ಹೆಣ್ಣನ್ನ ಮಾರಲು ಹೊರಟ ದುಷ್ಟ  ವ್ಯಕ್ತಿಯ ಕೈಯಿಂದ ಆಕೆಯನ್ನ ರಕ್ಷಿಸಲು ಹೊರಟ ನಾಯಕನಿಗೆ ಆಗೋ ತೊಂದರೆಗಳು  , ತನ್ನ ಕೈ ತಪ್ಪಿ ಆಕೆ ಮತ್ತೆ ದುಷ್ಟರ  ಪಾಲಾದಾಗ ಆಕೆಯನ್ನ ಹುಡುಕಲು ಹೊರಟವನಿಗೆ ತನ್ನ ಬದುಕಿನ ಕಾವಲುದಾರಿಗಳಲ್ಲಿ ಒಂದರ ಮೇಲೊಂದರಂತೆ ಎದುರಾಗೋ ಸಮಸ್ಯೆಗಳ , ಪ್ರೇಮ , ನೋವು ,ಅಸಹಾಯಕತೆಗಳ  ಕಥೆಯೇ ಈ ಆಕಸ್ಮಿಕ., ಡಾಕ್ಟರ್  ರಾಜ್ಕುಮಾರ್ , ಗೀತಾ , ಮಾಧವಿ ಮತ್ತು ವಜ್ರಮುನಿ ನಟನೆ  ಅದ್ಬುತ . ಈ ಸಿನಿಮಾ ಡಾ ಹಾಡುಗಳು , ಹಿನ್ನೆಲೆ  ಸಂಗೀತ , ಕಥೆ ಮತ್ತು ಎಲ್ಲರ ಅಭಿನಯ ಈ ಚಿತ್ರವನ್ನ ಇಂದಿಗೂ ಎಲ್ಲರೊಡನೆ ಕೂತು ನೋಡಲು ಮನಸ್ಸು ಇಚ್ಚಿಸುತ್ತದೆ. ಕೆಲವೊಂದೀ ಸಿನಿಮಾಗಳೇ ಹಾಗೆ ನೋಡುಗನನ್ನ ಬಹಳ ಬೇಗ ಆವರಿಸಿಕೊಂಡುಬಿಡುತ್ತದೆ ಆಕಸ್ಮಿಕ ಅದರಲ್ಲಿ ಒಂದು ಹಾಗಾಗಿ ಈ ಚಿತ್ರ ಒಂದು ಜನರೇಶನ್ ನ ಫೇವರಿಟ್ ಅಂದಿಗೂ ಇಂದಿಗೂ.



ಅಂದಿಗೂ ಇಂದಿಗೂ - Forever and today, Aakasmika is one of the superhit Kannada movie released on 20 Jul 1993. The movie is directed by T. S. Nagabharana and featured Madhavi and Rajkumar as lead characters. #DrRajkumar #Aakasmika #TSnagabharana #Madhavi #Superhit #thriller



Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

Kaddipudi 7 Years Celebration Shivarajkumar Duniya Suri