Shhh ಅಂದಿಗೂ ಇಂದಿಗೂ II One of the Best Horror Suspense Thriller movie in Sandalwood

 



೧೯೯೩ ರಲ್ಲಿ ಬಿಡುಗಡೆ ಆದ ಕನ್ನಡ ದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶ್!!! . ಅಸಾಮಾನ್ಯ ಪ್ರತಿಭೆ ಉಪೇಂದ್ರ ನಿರ್ದೇಶನದ ಎರಡನೇ ಚಿತ್ರ , ಮೊದಲನೇ ಚಿತ್ರ ತರ್ಲೆ ನನ್ಮಗ ಯಶಸ್ಸಿನ ನಂತರ ಸಿಕ್ಕ ಅವಕಾಶವನ್ನ ತನ್ನ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಉಪ್ಪಿ Shhh ನ್ನ ತೆರೆಗೆ ತರುವಲ್ಲಿ ಹೊಸ ಪ್ರಯೋಗಗಳನ್ನ ಕನ್ನಡಿಗರ ಮುಂದಿಟ್ಟಿದ್ದರು , ಈ ಸಿನಿಮಾ ದ ಚಿತ್ರ ಕಥೆ ಗೆ ಅಂದಿನ ಎಷ್ಟೋ ಹಿರಿಯ ನಿರ್ದೇಶಕರುಗಳು ತಲೆ ಬಾಗಿದ್ದರು , ಅಲ್ಲಿವರೆಗೂ ಬೆರಳೆಣಿಕೆಯಷ್ಟೇ ಸೂಸ್ಪೆನ್ಸ ಥ್ರಿಲ್ಲರ್ ಜೊಂವ್ರ್ ನ ಸಿನಿಮಾ ಗಳು ಕನ್ನಡದಲ್ಲಿ ತೆರೆ ಕಾಣುತ್ತಿದ್ದವು. ಈ ಸಿನಿಮಾ ದ ಮೂಲಕ ಉಪೇಂದ್ರ ಹೊಸ ಟ್ರೆಏಂಡ್ ಅನ್ನ ಸೃಷ್ಟಿ ಮಾಡಿಬಿಟ್ಟರು. ಕುಮಾರ್ ಗೋವಿಂದ್ ನಿರ್ಮಾಣ ಮತ್ತು ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ. ಅಶೋಕ್ ಕಶ್ಯಪ್ ಛಾಯಾಗ್ರಹಣ ಕೂಡ ಈ ಸಿನಿಮಾ ದ ಪ್ಲಸ್ ಪಾಯಿಂಟ್. ಈ ಸಿನಿಮಾ ದಲ್ಲಿ  ಬಾರೋ  ಹೊರರೋರ್ ಸೀಕ್ವೆನ್ಸ್ ಗಳು ಮತ್ತು ಅದಕ್ಕೆ ತಕ್ಕನಾದ BGM ಗಳು  ಇಂದು ಕೂಡ  ನೋಡುಗರಿಗೆ ಥ್ರಿಲ್ ನೀಡುತ್ತದೆ , ಥ್ರಿಲ್ಲರ್ಸಾ ಮಂಜು ನಿರ್ದೇಶನದ ಸ್ಟಂಟ್ ಅಂದು ನೋಡುಗನಿಗೆ ಕೊಟ್ಟ ಕಿಕ್ ಅಂತಿಟ್ಟದ್ದಲ್ಲ. ಸಾಧು ಕೋಕಿಲ ಸಂಗೀತ ನಿರ್ದೇಶನದ ಮೊದಲ ಚಿತ್ರ  ಇದ್ದಾಗಿದ್ದು ಅವರು ಕೊಟ್ಟ ಎರಡು ಹಾಡುಗಳು ಇಂದಿಗೂ ಗುನುಗೋ ಮೆಲೊಡಿಗಳು . ಅದಾಗಲೇ ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ನಟ ನಿರ್ದೇಶಕರಾಗಿ ಬೆಳೆದು ನಿಂತಿದ್ದ ಕಾಶಿನಾಥ್  ಮತ್ತು ಬ್ಯಾಂಕ್ ಜನಾರ್ಧನ್ ಪಾತ್ರಗಲ ನೆನಪು ಇಂದಿಗೂ  ಮಾಸಿಲ್ಲ . ಉಪ್ಪಿ ಒಂದು ಸಣ್ಣ ಪಾತ್ರದಲ್ಲಿ ಬಂದು ಒಬ್ಬ ನಟನಾಗಿ ಅಂದೇ ಪ್ರೂವೆ ಮಾಡಿ ಆಗಿತ್ತು.ಸಿನಿಮಾದ ಒಳಗೆ ನಡೆಯೋ ಸಿನಿಮಾ ಶೂಟಿಂಗ್ ಗಾಗಿ ಒಂಟಿ ಮನೆ ಎಸ್ಟೇಟ್ ಗೆ ಚಿತ್ರ ತಂಡ ಒಂದು ಬಂಡ ಮೇಲೆ ನಡೆಯೋ ನಿಗೂಢ ಸಾವುಗಳು,  ಪ್ರತಿ ದಿನ ಶೂಟಿಂಗ್ ಸುತ್ತ ಮುತ್ತ ನಡೆಯೋ ಭಯಾನಕ ಘಟನೆಗಳು, ಭಯ ಹುಟ್ಟಿಸೋ ಕೆಲವರ ವರ್ತನೆಗಳು  , ಒಂಟಿ ಮನೆ ಎಸ್ಟೇಟ್ಗೆ ಇರೋ ಹಳೆ ಇತಿಹಾಸ , ಇದೆಲ್ಲದರ  ಜಾಡು ಹಿಡಿದು ಹೊರಡೋ ನಾಯಕನ   ರೋಚಕ ಕತೆ ಏ ಈ ಶ್!!!  ರಾಜ್ಯ ಪ್ರಶಸ್ತಿ ಸಿಕ್ಕಿದ್ದಲ್ಲದೆ, ಭರ್ಜರಿ  ಕಲೆಕ್ಷನ್ ಜೊತೆಗೆ  ಪ್ರೇಕ್ಷಕನಿಗೆ ಹೊಸ ರೀತಿಯ ನಿರೂಪಣೆ ಯ ಕಿಕ್ ಕೊಟ್ಟು ಸೂಪರ್ ಹಿಟ್ ಆಗಿತ್ತು. ಎಷ್ಟೇ ಸೂಸ್ಪೆನ್ಸ ಥ್ರಿಲ್ಲರ್ ಸಿನಿಮಾ ಗಳು ಬಂದಿದ್ದರೂ  ಒಂದು ಜನರೇಶನ್ ಗೆ ಈ ಶ್!!! ಕೊಟ್ಟ ಥ್ರಿಲ್ ಮರೆಯೋ ಹಾಗಿಲ್ಲ , ೯೦ ರ ದಶಕದ ಚಿತ್ರ ಪ್ರೇಮಿಗಳಿಗೆ ಈ ಸಿನಿಮಾ ಎಲ್ಲ ಟೈಮ್ ಫೇವರಿಟ್ ಅಂದಿಗೂ ಇಂದಿಗೂ.


#upendra #upendrafans #superstatupendra #NimmaUppi




ಅಂದಿಗೂ ಇಂದಿಗೂ - Forever and today, One of the best horror movies of all time in the Sandalwood film industry. It comprises all elements - love, thriller, horror, Suspense, comedy, and sentiment. This story is about a film crew that arrives at a Coffee Estate. Soon the crew is haunted by few supernatural beings, during their shoot of a horror movie. Will they be able to escape? #shhh #upendra #horror #supense #thriller #kashinath #kumargovind Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

Kaddipudi 7 Years Celebration Shivarajkumar Duniya Suri