Will these Top 5 directors can create a revolution? II ಇವರೇ ಆ 5 ನಿರ್ದೇಶಕರು

Will these Top 5 directors can create a revolution?





ವೆಬ್ ಸೀರೀಸ್ ಅನ್ನೋ ಮಾಯೆ ಇತ್ತೀಚಿನ ಕೆಲ ವರ್ಷಗಳಲ್ಲಿ ಯುವ ಜನತೆಯನ್ನ ಬಹಳ ಆವರಿಸಿಕೊಂಡಿರುವ ಮಾಧ್ಯಮ, ತಾವು ಕುಳಿತಲ್ಲೇ ಮೊಬೈಲ್ ನಲ್ಲೋ ಅಥವಾ ಟಿವಿ ಯಲ್ಲೋ ಯಾವುದೇ ತಕರಾರಿಲ್ಲದೆ ತಮಗೆ ಬೇಕಾದ ಸೀರೀಸ್ ಅನ್ನು ನೋಡುತ್ತಾ ಕಾಲ ಕಳೆಯಬಹುದು. ಒಂದಕ್ಕಿಂತ ಒಂದು ವಿಭಿನ್ನ ಕಥಾ ಹಂದರಗಳನ್ನ ಇಟ್ಟುಕೊಂಡು ವೆಬ್ ಸೀರಿಸ್ ಗಳು ವೀಕ್ಷಕರ ಬಳಿಗೆ ನೇರವಾಗಿ ಲಗ್ಗೆ ಇಡುತ್ತಿದೆ.ಒಂದು ಮಟ್ಟಿಗೆ ಸಿನಿಮಾ ಗಳನ್ನೂ ಮೀರಿಸುವಂಥ ಸೀರೀಸ್ ಗಳು ಬಂದಿರೋದು ಅದರ ಗುಣಮಟ್ಟ ಮತ್ತು ಜನಪ್ರಿಯತೆಯನ್ನ ಹೆಚ್ಚಿಸಿದೆ, ನಿರ್ಮಾಪಕರು ಅಥವಾ ಪ್ರೊಡಕ್ಷನ್ ಕಂಪನಿ ಗಳಿಗೆ ಸಾಕಷ್ಟು ಹಣವನ್ನು ಕೂಡ ಗಳಿಸಿಕೊಟ್ಟಿರೋ ಈ ವೆಬ್ ಸೀರೀಸ್ ಅನ್ನೋ ಹೊಸ ದಿಕ್ಕಿಗೆ ಗೆ netflix, amazon Prime, zee 5 , voot ಇನ್ನೂ ಹಲವಾರು ಪ್ಲಾಟ್ಫಾರ್ಮ್ ಗಳು ಪಾಲಕರಾಗಿ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ದಲ್ಲೂ ವೆಬ್ ಸೀರೀಸ್ ಅನ್ನೋ ಮಾತು ಕೇಳಿ ಬರುತ್ತಲೇ ಇದೆ ಆದರೆ ಯಾವುದೂ ಅಷ್ಟೊಂದು ಸದ್ದು ಮಾಡಿದ್ದು ಕಂಡಿಲ್ಲ, ಹೀಗಾಗಿ ಯುವ ವೀಕ್ಷಕರು ಅತೀ ಹೆಚ್ಚು ಬೇರೆ ಭಾಷೆಯ ಸೀರೀಸ್ ಗಳಿಗೆ ಒತ್ತು ಕೊಡುತ್ತಿದ್ದಾರೆ, ಕನ್ನಡದಲ್ಲಿ ಬೇರೆ ಭಾಷೆಗಳಿಗೆ ಸರಿ ಸಾಟಿಯಾಗಿ ನಿಲ್ಲಲಾಗದು ಎನ್ನುವ ಸಣ್ಣದೊಂದು ಕಪ್ಪು ಚುಕ್ಕೆ ನಮ್ಮೊಳಗೇ ಕಾಣಿಸಿಕೊಂಡಿದೆ, ಕನ್ನಡದಲ್ಲಿ ವೆಬ್ ಸೀರೀಸ್ ಗಳನ್ನ ತಯಾರಿ ಮಾಡಬಲ್ಲ ಪ್ರತಿಭೆ ಗಳು ಇಲ್ಲ ಅಂತ ಅಲ್ಲ ಆದರೆ ಮನಸ್ಸು ಮಾಡಬೇಕಿದೆ. ಒಂದು ಹೆಜ್ಜೆ ಮುಂದೆ ಇಟ್ಟು ದೊಡ್ಡ ಮಟ್ಟದಲ್ಲಿ ಸವಾಲ್ ಅನ್ನ ಸ್ವೀಕರಿಸಬೇಕಿದೆ, ಸಿನಿಮಾ ಮೋಕ್ಟ್ರೈಲ್ ತಂಡ ತನ್ನದೇ ಒಂದು ಪಟ್ಟಿಯನ್ನ ಸಿದ್ದ ಮಾಡಿ ನಿಮ್ಮ ಮುಂದೆ ಇಡ್ತಾ ಇದೆ , ಇದು ಸಮರ್ಥವಾಗಿ ಕನ್ನಡದಲ್ಲೂ ಬೇರೆ ಭಾಷೆಗೆ ಸಡ್ಡು ಹೊಡೆದು ಅತ್ಯತ್ತಮ ಗುಣ ಮಟ್ಟದ ವೆಬ್ ಸೀರೀಸ್ ನಿರ್ದೇಶಿಸಬಲ್ಲ ೫ ಟಾಲೆಂಟೆಡ್ ಡೈರೆಕ್ಟರ್ಸ್ ರ ಪಟ್ಟಿ . ೫ ಜಯತೀರ್ಥ , ಕನ್ನಡ ದ ಪ್ರತಿಭಾನ್ವಿತ ನಿರ್ದೇಶಕರಲ್ಲೊಬ್ಬರು. ಕಳೆದ ವರ್ಷದ ಸೂಪರ್ ಹಿಟ್ ಚಿತ್ರ ಬೆಲ್ ಬಾಟಮ್ ನ ಚಿತ್ರದ ನಿರ್ದೇಶರಾದ ಇವರು ಇಲ್ಲಿವರೆಗೂ ಸುಮಾರು ೮ ಚಿತ್ರಗಳನ್ನ ನಿರ್ದೇಶಿಸಿದ್ದಾರೆ , ಎಲ್ಲವೂ ವಿಭಿನ್ನ ಕಥಾ ಹಂದರ ವನ್ನು ಒಳಗೊಂಡ ಚಿತ್ರಗಳಾಗಿದ್ದು ಚಿತ್ರಕತೆಯನ್ನ ಅದ್ಭುತವಾಗಿ ಹೆಣೆಯೋ ಇವರು ಪಾತ್ರ ಪೋಷಣೆಯಲ್ಲಿ ಎತ್ತಿದ ಕೈ ,ಅಚ್ಚುಕಟ್ಟಾಗಿ ನೈಜತೆಯ ಜೊತೆಗೆ ಕತೆ ಹೇಳೋದು ಇವರ ಪ್ಲಸ್ ಪಾಯಿಂಟ್ . ನಮ್ಮ ಈ ಪಟ್ಟಿಯಲ್ಲಿ ೫ ನೇ ಸ್ಥಾನದಲ್ಲಿದ್ದಾರೆ. ೪ . ಹೇಮಂತ್ ರಾವ್ , ಸಸ್ಪೆನ್ಸ್ ಮತ್ತು ಡ್ರಾಮಾ ವನ್ನ ಅಷ್ಟೇ ಸೊಗಸಾಗಿ ಚಿತ್ರ ಕತೆ ಮೂಲಕ ಕಟ್ಟಿ ಕೊಡೊ ನಿರ್ದೇಶಕ, ಇವರ ಕಾವಲುದಾರಿ ಇದಕ್ಕೆ ಒಂದು ಉದಾಹರಣೆ, ಅಷ್ಟೇ ಅಲ್ಲ ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಆಷ್ಮಾನ್ ಖುರಾನಾ ನಟನೆಯ andadhun ಸಿನಿಮಾ ದ ಚಿತ್ರಕತೆ ಯಲ್ಲಿ ಕೂಡ ಇವರ ಪಾಲಿದೆ, ವಿಭಿನ್ನ ಆಲೋಚನೆಗಳನ್ನ ತೆರೆ ಮೇರೇ ತರಲು ಸದಾ ಹಾತೊರೆಯುವ ಹೇಮಂತ್ ರಾವ್ ಸಿನಿಮಾ ಮೋಕ್ಟ್ರೈಲ್ ತಂಡದ ಪಟ್ಟಿಯಲ್ಲಿ ೪ ನೇ ಸ್ಥಾನದಲ್ಲಿದ್ದರೆ. ೩ ರಿಷಬ್ ಶೆಟ್ಟಿ , ಸದ್ಯಕ್ಕೆ ಕನ್ನಡ ಚಿತ್ರ ರಂಗದ ಬಹುಮುಖ ಪ್ರತಿಭೆ , ಸಲೀಸಾಗಿ ಜನಮಾನಸದಲ್ಲಿ ತಮ್ಮ ಟ್ಯಾಲೆಂಟ್ ಮೂಲಕ ಹೆಸರು ಮಾಡಿರೋ ಇವರು ನಿರ್ದೇಶಿಸಿದ ಅಷ್ಟೂ ಚಿತ್ರಗಳು ಸೂಪರ್ ಹಿಟ್, ಚಿತ್ರದಿಂದ ಚಿತ್ರಕ್ಕೆ ವಿಭಿನ್ನತೆ ಕೊಟ್ಟಿರೋ ರಿಷಬ್ ಶೆಟ್ಟಿ ಒಳ್ಳೆ ಗುಣಮಟ್ಟದ ವೆಬ್ ಸೀರೀಸ್ ಗಳನ್ನ ಕನ್ನಡಿಗರಿಗೆ ಕೊಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಸಿನಿಮಾ ಮೋಕ್ಟ್ರೈನ್ ನ ಪಟ್ಟಿಯಲ್ಲಿ ರಿಷಬ್ ೩ ಸ್ಥಾನ ದಲ್ಲಿ ಇದ್ದಾರೆ. ೨ . ರಕ್ಷಿತ್ ಶೆಟ್ಟಿ , ಉಳಿದವರು ಕಂಡಂತೆ ಅನ್ನೋ ಕ್ಲಾಸಿಕ್ ಕಲ್ಟ್ ಸಿನಿಮಾ ವನ್ನ ಕನ್ನಡಿಗರಿಗೆ ಕೊಟ್ಟ ಇವರು technically ಎಂಥ ನಿರ್ದೇಶಕ ಎಂದು ಕನ್ನಡಿಗರಿಗೆ ಚನ್ನಾಗಿ ಗೊತ್ತು , ಚಿತ್ರ ಕತೆಗಳನ್ನ ಬೇರೊಂದು ದಿಕ್ಕಿನಿಂದಲೇ ವೀಕ್ಷಕರಿಗೆ ತೋರಿಸೋ ಇವರು ಇತ್ತೀಚೆಗೆ ರಚಿಸಿ ನಟಿಸಿದ ಅವನೇ ಶ್ರೀಮನ್ನಾರಾಯಣ ದೇಶದ ಎಲ್ಲ ಬಾಗಗಳಲ್ಲೂ ಸುದ್ದಿ ಮಾಡಿದ್ದು ಗೊತ್ತೇ ಇದೆ, ಸದಾ ದೊಡ್ಡ ಮಟ್ಟದಲ್ಲೇ ಯೋಚಿಸೋ ಇವರು technically ಒಳ್ಳೊಳ್ಳೆ ಸೀರೀಸ್ ಗಳನ್ನ ಕೊಡೋದರಲ್ಲಿ ಡೌಟ್ ಎ ಇಲ್ಲ. ರಕ್ಷಿತ್ ಶೆಟ್ಟಿ ಸಿನಿಮಾ ಮೋಕ್ಟ್ರೈಲ್ ಪಟ್ಟಿಯಲ್ಲಿ ೨ ನೇ ಸ್ಥಾನದಲ್ಲಿದ್ದಾರೆ. ೧.ಪವನ್ ಕುಮಾರ್ , ವೆಬ್ ಸೀರೀಸ್ ಗೆ ಬೇಕಾದ ಎಲ್ಲ ನಿಪುಣ್ಯತೆ ಮತ್ತು ತಂತ್ರಗಾರಿಕೆ ಪವನ್ ಕುಮಾರ್ ಗೆ ಇದೆ. ಇಲ್ಲವರೆಗೂ ಇವರು ನಿರ್ದೇಶಿದ ಕೆಲವಷ್ಟೇ ಸಿನೆಮಾಗಳಲ್ಲಿ ಇವರ ಪ್ರತಿಭೆ ಏನು ಅನ್ನೋದನ್ನ ಜಗಜ್ಜಾಹೀರು ಮಾಡಿದ್ದಾರೆ, ಕನ್ನಡ ಅಷ್ಟೇ ಅಲ್ಲದೆ ತಮಿಳು ತೆಲುಗು ಚಿತ್ರರಂಗಕ್ಕೂ ತನ್ನದೇ ಕನ್ನಡ ಸಿನೆಮಾಗಳ ರಿಮೇಕ್ ಮಾಡಿ ಸ್ಯೆ ಎನಿಸಿಕೊಂಡಿದ್ದಾರೆ, ಸದಾ ಹೊಸ ರೀತಿಯ ಸ್ಕ್ರಿಪ್ಟ್ಸ ನ ಆಯ್ಕೆ ಮಾಡ್ಕೊಳ್ಳೋ ಇವರು ಎಕ್ಸ್ಪೆರಿಮೆಂಟ್ಸ್ ಗಳಲ್ಲಿ ಎತ್ತಿದ ಕೈ.netflix ಗೆ ಈಗಾಗಲೇ ಸೀರೀಸ್ ಒಂದನ್ನ ಹಿಂದಿ ಭಾಷೆಯಲ್ಲಿ ನಿರ್ದೇಶಿಸಲು ಹೊರಟಿರೋ ಇವರು ಕನ್ನಡದಲ್ಲಿ ಅದ್ಬುತ ಅನಿಸೋ ಕತೆಗಳನ್ನ ಮತ್ತು ದೃಶ್ಯಗಳನ್ನ ಕಟ್ಟಿ ಕೊಡಬಲ್ಲ ಸಮರ್ಥ ನಿರ್ದೇಶಕ. ಪವನ್ ಕುಮಾರ್ ಸಿನಿಮಾ ಮೋಕ್ಟ್ರೈಲ್ ನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ . ನಿಮಗೂ ಈ ಪಟ್ಟಿ ಸರಿ ಅನ್ನಿಸಿದ್ರೆ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಗಳನ್ನ ತಿಳಿಸಿ, ಗಟ್ಟಿ ಕತೆ ಮತ್ತು ಒಳ್ಳೆ ಗುಣಮಟ್ಟದ making ಒಳೊಗೊಂಡ ಸೀರೀಸ್ ಗಳು ಕನ್ನಡಲ್ಲೂ ಬರಲಿ ಮತ್ತು ಬೇರೆ ಬಾಷೆಯವರು ಬೇರೆ ದೇಶದವರೂ ನೋಡೋ ಹಾಗೆ ಅಲೆ ಎಬ್ಬಿಸಲಿ ಎಂದು ಸಿನಿಮಾ ಮೋಕ್ಟ್ರೈಲ್ ತಂಡ ಆಶಿಸುತ್ತದೆ.

#top5directors #Directors #kannadadirector #kannadawebseries Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

Kaddipudi 7 Years Celebration Shivarajkumar Duniya Suri

Nam Gani Bcom Pass I Director Abhishek Shetty Announces His Next Film GAJANANA AND GANG II ಸದ್ದು ಮಾಡದೇ ಸುದ್ದಿ ಮಾಡ್ತಿರೋ ಗಜಾನನ ಅಂಡ್ ಗ್ಯಾಂಗ್