Amruthavarshini ಅಂದಿಗೂ ಇಂದಿಗೂ One of the Heart Touching Love Story Made In Sandalwood
ಅಮೃತ ವರ್ಷಿಣಿ , ೧೯೯೭ ರಲ್ಲಿ ಬಿಡುಗಡೆ ಆದ ಈ ಚಿತ್ರದ ತುಂತುರು ಅಲ್ಲಿ ನೀರ ಹಾಡು ಅನ್ನೋ ಒಂದು ಹಾಡು ಯುವ ಜನಮಾನಸದಲ್ಲಿ ಅಂದಿನಿಂದ ಇಂದಿಗೂ ನೆಲೆಯೂರಿದೆ. ದಿನೇಶ್ ಬಾಬೂ ನಿರ್ದೇಶನದ ಈ ಸಿನಿಮಾ ಅಂದಿನ ಮಟ್ಟಿಗೆ ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಪ್ರಯೋಗ. ಚಂದದ ನಟ ರಮೇಶ್ ಅರವಿಂದ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡರೂ, ಈ ಸಿನಿಮಾ ಅಂದು ದಾಖಲೆ ಬರೆದಿತ್ತು. ಫಿಲಂ ಫೇರ್ ಮತ್ತು ರಾಜ್ಯ ಪ್ರಶಸ್ತಿಗಳ ಸುರಿ ಮಳೆ ಯಾಗಿತ್ತು. ಸಿನಿಮಾದ ಚಿತ್ರ ಕಥೆ, ಶರತ್ ಬಾಬೂ ಸುಹಾಸಿನಿ ರಮೇಶ್ ರ ನಟನೆ ಅದ್ಬುತ . ಹಲವು ವರುಷಗಳ ಪ್ರೇಯಸಿ ಯನ್ನ ಖಾಯಿಲೆಯಿಂದ ಕಳೆದುಕೊಂಡ ಅಭಿಷೇಕ್ ಸ್ನೇಹಿತ ಹೇಮಂತ್ ಮನೆಗೆ ಬಂದಾಗ ಆತನ ಹೆಂಡತಿ ಯಲ್ಲಿ ತೀರಿ ಹೋದ ಪ್ರೇಯಸಿಯ ಗುಣಗಳನ್ನ ಕಂಡು ಆಕೆಯನ್ನ ತನಗರಿವಿಲ್ಲದಂತೆ ಗಾಢವಾಗಿ ಪ್ರೀತಿಸುತ್ತಾನೆ. ಹೇಮಂತ್ಗೆ ಈ ವಿಷಯ ತಿಳಿಯುತ್ತಿದ್ದಂತೆ ಅಭಿಷೇಕ್ ಅವನನ್ನ ಪ್ರಪಾತಕ್ಕಿ ತಳ್ಳಿ ಸಾಯಿಸುತ್ತಾನೆ, ಅಭಿಷೇಕ್ ಮಾಡಿದ ಈ ಕೆಲಸ ವೀಣಾ ಳಿಗೆ ತಿಳಿದಾಗ ಮುಂದೇನಾಗುವುದು ಎನ್ನೋದೇ ಈ ಸಿನಿಮಾದ ತಿರುಳು. ರಮೇಶ್ ಮತ್ತು ಸುಹಾಸಿನಿ ಯಾ ಅಭಿನಯ ೯೦ ರ ದಶಕದ ಯುವಕ ಯುವತಿಯರ ಮನಸಲ್ಲಿ ಅಚ್ಚಳಿಯದೆ ಉಳಿದಿತ್ತು. ಸುಮಾರು ೯ ಹಾಡುಗಳ ಸಾಹಿತ್ಯ ಬರೆದ ಕೆ ಕಲ್ಯಾಣ್ ಈ ಸಿನಿಮಾ ಗೆ ದೊಡ್ಡ ಪ್ಲಸ್ ಪಾಯಿಂಟ್. ಅಮೃತ ವರ್ಷಿಣಿ ಎಂದೊಡನೆ ಹಾಡುಗಳು ಮತ್ತು ಈ ಮೂರು ನಟರ ಅಭಿನಯ ಇಂದಿಗೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ , ಅಮೃತ ವರ್ಷಿಣಿ ಒಂದು ಜನರೇಶನ್ ನ ಆಲ್ ಟೈಮ್ ಫೇವರಿಟ್ ಅಂದಿಗೂ - ಇಂದಿಗೂ.
ಅಂದಿಗೂ ಇಂದಿಗೂ - Forever and today, Amrutha Varshini is a 1997 Kannada drama film and a touching Love Story ever made in sandalwood industry, starring Ramesh Aravind, Suhasini Maniratnam, Sharath Babu, Nivedita Jain. Hemant and Veena are a happily engaged couple. Their life turns upside down when Hemant's friend Abhishek enters their life. Abhishek is smitten by Veena and soon gets obsessed with her. He tries to kill Hemant to marry Veena. Will he succeed? #Amruthavarshini #RameshAravind #SuhasiniManiratnam #SharathBabu #NiveditaJain #sandalwood #evergreenlovestory #Foreverandtoday #ಅಂದಿಗೂಇಂದಿಗೂ Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry. @Cinema Mocktail !!!! Subscribe to Cinema Mocktail today. #CinemaMocktail

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ