Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.
ನಾ ನಿನ್ನ ಬಿಡಲಾರೆ ಕನ್ನಡದ ಅತಿ ಜನಪ್ರಿಯ horror ಚಿತ್ರ, ೧೯೭೯ ರಲ್ಲಿ ಬಿಡುಗಡೆ ಆದ ಈ ಚಿತ್ರ ಆ ವರ್ಷದ ಅತೀ ಹೆಚ್ಚು ಗಳಿಕೆಯ ಏಕಾಯ್ಕ ಕನ್ನಡ ಚಿತ್ರವಾಗಿತ್ತು. ಪ್ರೇಮ ನಿರಾಕರಿಸಿದ ಪ್ರಿಯಕರನ ದೇಹದೊಳಗೆ ನೊಂದ ಸತ್ತ ಪ್ರೇಯಸಿ ಹೊಕ್ಕು ನಾಯಕ ಮತ್ತು ಅವನ ಹೆಂಡತಿಯನ್ನ ಪ್ರೇತವಾಗಿ ಕಾಡುವ ಚಿತ್ರ . ಅನಂತ್ನಾಗ್ ಅವರ ಅದ್ಬುತ ನಟನೆ ಎಷ್ಟೋ ವರುಶಗಳವರೆಗೆ ಮನೆ ಮಾತಾಗಿತ್ತು , ಅಲ್ಲಿವರೆಗೂ ಅನಂತ್ನಾಗ್ ಅವರನ್ನ ಮೃದು ಪಾತ್ರಗಳಲ್ಲಿ ನೋಡಿದ್ದ ವೀಕ್ಷಕರಿಗೆ ಈ ಸಿನಿಮಾ ಅನಂತ್ನಾಗ್ ಇಂತಹ ನಟ ಅನ್ನೋದನ್ನ ತೋರಿಸಿತ್ತು .ಅನಂತ್ನಾಗ್ ಮತ್ತು ಲಕ್ಷ್ಮಿ ಅವರು ಜೋಡಿಯಾಗಿ ನಟಿಸಿದ ಮೊದಲ ಚಿತ್ರ ನಾ ನಿನ್ನ ಬಿಡಲಾರೆ. ಇದೆ ಜೋಡಿ ಮುಂದೆ ಭಾರತ ಚಿತ್ರ ರಂಗದಲ್ಲೇ ಯಶಸ್ವಿ ಜೋಡಿ ಎನಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಅಪರೂಪದ ನಿರೂಪಣೆಯಿಂದ ಮತ್ತು ಸೌಂಡ್ ಎಫೆಕ್ಟ್ ನಿಂದ ಆಗಿನ ಕಾಲದಲ್ಲೇ ಈ ಸಿನಿಮಾ ಕನ್ನಡಿಗರ ಎದೆ ಝಲ್ ಅನಿಸಿದ್ದು ಸುಳ್ಳಲ್ಲ , ಈಗಲೂ ಈ ಸಿನಿಮಾ ನೋಡುಗರಿಗೆ ಅದೇ ಅನುಭವ ನೀಡುತ್ತದೆ.ಇದೆ ಚಿತ್ರ ಮುಂದೆ ಹಿಂದಿಯಲ್ಲೂ ಮಂಗಲಸೂತ್ರ ಅನ್ನೋ ಶೀರ್ಷಿಕೆಯಿಂದ ರಿಮೇಕ್ ಆಗಿತ್ತು. ಈ ಚಿತ್ರಕ್ಕಾಗಿ ಅನಂತನಾಗ್ ಅವರಿಗೆ ಫಿಲಂ ಫಾರ್ ಅವಾರ್ಡ್ ಕೂಡ ಬಂದಿತ್ತು , ಎಷ್ಟೋ ಹೊರ್ರರ್ ಸಿನಿಮಾಗಳು ಬಂದರೂ ಹೋದರು ನಾ ನಿನ್ನ ಬಿಡಲಾರೆ ಅಂದಿನ ಜನರೇಶನ್ ನ ಎಲ್ಲರ ಫೇವರಿಟ್ , ಅಂದಿಗೂ ಇಂದಿಗೂ


#naninnabidalaare #anantnag #lakshmi #horror #sandalwood
Cinema Mocktail is your one-stop hub to all entertainment. Be it Teaser, Trailers, Audio launch, Film Reviews, Press release, Hot and Cold Gossips, Cinema Mocktail brings you a collection of all the latest updates from Sandalwood. Find all the latest updates from the Kannada film industry.@Cinema Mocktail !!!!
Subscribe to Cinema Mocktail today.
#CinemaMocktail
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ