ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Ramaachari ಅಂದಿಗೂ ಇಂದಿಗೂ II One of the Best Musical drama Movie in Sandalwood

ಇಮೇಜ್
 ರಾಮಾಚಾರಿ, ೧೯೯೧ ರಲ್ಲಿ ಬಿಡುಗಡೆ ಆದ ಈ ಸಿನಿಮಾ ಅಂದು ಅತಿ ದೊಡ್ಡ ಇತಿಹಾಸಾನೇ ಬರೆದಿತ್ತು . ರವಿಚಂದ್ರನ್  ಮತ್ತು ಮಾಲಾಶ್ರೀ ಜೋಡಿ  ತೆರೆ ಮೇಲೆ  ಮಾಡಿದ್ದ ಮೋದಿ ಅಂತಾದ್ದು. ದುಬಾರಿ ವೆಚ್ಚದಲ್ಲಿ  ಶಾಂತಿ ಕ್ರಾಂತಿ ಸಿನಿಮಾ ನಿರ್ಮಾಣ ಮಾಡಿ ಆಗಷ್ಟೇ ಸೋಲು ಕಂಡಿದ್ದ  ರವಿಚಂದ್ರನ್ ಗೆ ಗೆಲುವಿನ ದಾರಿ ತೋರಿಸಿತ್ತು ಈ ರಾಮಾಚಾರಿ. ತಮಿಳಿನ  ಚಿನ್ನ ತಂಬಿ ಅನ್ನೋ ಸೂಪರ್ ಹಿಟ್ ಚಿತ್ರ ಕನ್ನಡಲ್ಲಿ ರಾಮಾಚಾರಿ ಆದಾಗ ಚಿತ್ರ ರಂಗದಲ್ಲೊಂದು ಸಂಚಲನ ಮೂಡಿತ್ತು.  ಡಿ  ರಾಜೇಂದ್ರ ಬಾಬು ಈ ಸಿನಿಮಾ ಡಾ ನಿರ್ದೇಶಕರು,ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಹಲವಾರು ತಲೆಮಾರುಗಳೇ ಕಳೆದರೂ ಇಂದಿಗೂ ಹಚಾ ಹಸಿರಾಗೇ ಇದೆ..ಯಾರಿವಳು ಯಾರಿವಳು ಹಾಡು ಅಂದಿನ ಸೂಪರ್ ಫೇವರಿಟ್. ಈ ಸಿನಿಮಾ ಡ ಸಂಗೀತ ಸಂಯೋಜನೆ ಹಂಸಲೇಖ ಅವರಿಗೆ ಫಿಲಂ ಫಾರ್ ಅವಾರ್ಡ್ ತಂದುಕೊಟ್ಟಿತ್ತು.  ಶ್ರೀಮಂತ ಮನೆತನದ ೫  ಅಣ್ಣಂದಿರ ಮುದ್ದಿನ ತಂಗಿ ನಂದಿನಿಯ ಬಾಳಲ್ಲಿ ಮುಗ್ದ  ರಾಮಾಚಾರಿ ಬಂದಾಗ ಆಕೆಯ ಬದುಕಲ್ಲಿ ನಡೆಯೋ ಸಾಲು ಸಾಲು ಆಚರಿಗಳು ಈ ರಾಮಾಚಾರಿ, ತಿಳಿಯದೆ ನಾಯಕಿ ಗೆ ತಾಳಿ ಕಟ್ಟಿ ರಾಮಾಚಾರಿ ಮತ್ತು ಆತನ ವಿಧವೆ ತಾಯಿ ನಾಯಕಿಯ  ೫ ಅಣ್ಣಂದಿರ ಕ್ರೂರತ್ವ ಡಾ  ನಡುವೆ ನಲುಗಿ ಒದ್ದಾಡಿ ಗೆಲ್ಲೋದೇ  ಈ ರಾಮಾಚಾರಿ.   ರವಿಚಂದ್ರನ್ ಮತ್ತು ಮಾಲಾಶ್ರೀಯ ಸಿನಿಮಾ ಕೆರಿಯರ್ ನ ಯಶಸ್ವ...

Muthina Haara ಅಂದಿಗೂ ಇಂದಿಗೂ II One of the Best War Drama Movie in Sandalwood

ಇಮೇಜ್
 ಮುತ್ತಿನ ಹಾರ , ವಿಷ್ಣುವರ್ಧನ್ ಸಿನಿಮಾ ಜೀವನದ ಅತ್ತ್ಯತ್ತಮ ಚಿತ್ರಗಳಲ್ಲೊಂದು , ೧೯೯೦ ರಲ್ಲಿ ಬಿಡುಗಡೆ ಆದ ಈ ಸಿನಿಮಾ ರಾಜೇಂದ್ರ ಸಿಂಗ್ ಬಾಬು ಇಂತಹ   ಅಸಾಮಾನ್ಯ ನಿರ್ದೇಶಕ  ಅನ್ನೋದನ್ನ. ಕನ್ನಡ ಚಿತ್ರ ರಂಗಕ್ಕೆ ಸಾರಿ ಹೇಳಿತ್ತು. ಮಡಿಕೇರಿ ಸಿಪಾಯಿ ಅನ್ನೋ ಒಂದು ಹಾಡು ಇಡೀ ದೇಶದ ಇಕ್ಕೆಲೆಗಳಲ್ಲಿದ್ದ  ಕೊಡವರ ನರ ನಾಡಿ  ಹೊಕ್ಕಿತ್ತು.ಮುತ್ತಿನ ಹಾರ ಸಿನಿಮಾ ಕನ್ನಡ ಡಾ  ಪ್ರೇಕ್ಷಕರಿಗೆ ದೇಶ ಭಕ್ತಿ , ಯುದ್ಧ ಮತ್ತು ಸೈನಿಕ ರ ವಯಕ್ತಿಕ  ಜೀವನದ ಅನಾವರಣ ಮಾಡಿತ್ತು. ಇದೆಲ್ಲವನ್ನ ಮೀರಿ ನಿಂತಿದ್ದು ವಿಷ್ಣುವರ್ಧನ್ ಸುಹಾಸಿನಿ ಮತ್ತು ಅಶ್ವಥ್ ರ ಮನಸು ಮುಟ್ಟುವ ನಟನೆ. , ಸಿನಿಮಾ ದಲ್ಲಿ ಹಂಸಲೇಖ ಸಂಯೋಜನೆಯ ಒಂದೊಂದು ಹಾಡುಗಳೂ ಒಂದೊಂದು ಜೋಡಿಸಿದ ಹಾಗಿತ್ತು. ಚಿತ್ರದ ನಾಯಕ ನೇ ಸೈನಿಕ. ವಿಶ್ವ ಯುದ್ಧ , ಪ್ರೇಮ, ಬದುಕು, ಮಗನ ಮೇಲಿನ ಮಮಕಾರ, ನಗು, ಅಳು, ತಂದೆ ತಾಯಿಯರ ತೊಳಲಾಟ ಎಲ್ಲ ಭಾವನೆಗಳೂ ಇಲ್ಲಿ  ನೋಡುಗ ಪ್ರೇಕ್ಷಕನನ್ನ ತುಂಬಾ ದಿನ ಕಾಡಿದ್ದವು.  ರಾಷ್ಟ್ರ ಪ್ರಶಸ್ತಿ , ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಈ ಸಿನಿಮಾ ಗೆ ದಕ್ಕಿತ್ತು. ಮುತ್ತಿನ ಹಾರ ಚಿತ್ರದ ವಿಶುಅಲ್ಸ್  ಮತ್ತು ಹಿನ್ನೆಲೆ ಸಂಗೀತ ಅಂದು ಕನ್ನಡ ದ ಪ್ರೇಕ್ಷಕರಿಗೆ ಎಲ್ಲಿಲ್ಲದ ಹೊಸ ಅನುಭವ. ಇಂತಹ ಸಿನಿಮಾವನ್ನ ಕನ್ನಡಕ್ಕೆ ನೀಡಿದ ನಿರ್ದೇಶಕರಿಗೆ ದೊಡ್ಡ ಸಲಾಂ. ಮುತ್ತಿನ ಹಾರ ಯುವ ಪ್ರೇಮಿಗಳಿಂದ...

Amruthavarshini ಅಂದಿಗೂ ಇಂದಿಗೂ One of the Heart Touching Love Story Made In Sandalwood

ಇಮೇಜ್
 ಅಮೃತ ವರ್ಷಿಣಿ , ೧೯೯೭ ರಲ್ಲಿ ಬಿಡುಗಡೆ ಆದ ಈ ಚಿತ್ರದ ತುಂತುರು ಅಲ್ಲಿ ನೀರ ಹಾಡು ಅನ್ನೋ ಒಂದು ಹಾಡು ಯುವ ಜನಮಾನಸದಲ್ಲಿ ಅಂದಿನಿಂದ ಇಂದಿಗೂ ನೆಲೆಯೂರಿದೆ. ದಿನೇಶ್ ಬಾಬೂ ನಿರ್ದೇಶನದ ಈ ಸಿನಿಮಾ ಅಂದಿನ ಮಟ್ಟಿಗೆ ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಪ್ರಯೋಗ. ಚಂದದ ನಟ ರಮೇಶ್ ಅರವಿಂದ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡರೂ, ಈ ಸಿನಿಮಾ  ಅಂದು ದಾಖಲೆ ಬರೆದಿತ್ತು. ಫಿಲಂ ಫೇರ್  ಮತ್ತು ರಾಜ್ಯ ಪ್ರಶಸ್ತಿಗಳ ಸುರಿ ಮಳೆ ಯಾಗಿತ್ತು. ಸಿನಿಮಾದ ಚಿತ್ರ ಕಥೆ, ಶರತ್ ಬಾಬೂ ಸುಹಾಸಿನಿ ರಮೇಶ್ ರ ನಟನೆ ಅದ್ಬುತ . ಹಲವು ವರುಷಗಳ ಪ್ರೇಯಸಿ ಯನ್ನ ಖಾಯಿಲೆಯಿಂದ ಕಳೆದುಕೊಂಡ ಅಭಿಷೇಕ್ ಸ್ನೇಹಿತ ಹೇಮಂತ್ ಮನೆಗೆ ಬಂದಾಗ ಆತನ ಹೆಂಡತಿ ಯಲ್ಲಿ  ತೀರಿ ಹೋದ ಪ್ರೇಯಸಿಯ ಗುಣಗಳನ್ನ ಕಂಡು ಆಕೆಯನ್ನ ತನಗರಿವಿಲ್ಲದಂತೆ ಗಾಢವಾಗಿ ಪ್ರೀತಿಸುತ್ತಾನೆ. ಹೇಮಂತ್ಗೆ   ಈ ವಿಷಯ ತಿಳಿಯುತ್ತಿದ್ದಂತೆ ಅಭಿಷೇಕ್ ಅವನನ್ನ ಪ್ರಪಾತಕ್ಕಿ ತಳ್ಳಿ ಸಾಯಿಸುತ್ತಾನೆ, ಅಭಿಷೇಕ್ ಮಾಡಿದ ಈ ಕೆಲಸ ವೀಣಾ ಳಿಗೆ ತಿಳಿದಾಗ ಮುಂದೇನಾಗುವುದು ಎನ್ನೋದೇ ಈ ಸಿನಿಮಾದ ತಿರುಳು. ರಮೇಶ್ ಮತ್ತು ಸುಹಾಸಿನಿ ಯಾ ಅಭಿನಯ ೯೦ ರ ದಶಕದ ಯುವಕ ಯುವತಿಯರ ಮನಸಲ್ಲಿ ಅಚ್ಚಳಿಯದೆ ಉಳಿದಿತ್ತು. ಸುಮಾರು ೯ ಹಾಡುಗಳ ಸಾಹಿತ್ಯ  ಬರೆದ ಕೆ ಕಲ್ಯಾಣ್ ಈ ಸಿನಿಮಾ ಗೆ ದೊಡ್ಡ ಪ್ಲಸ್ ಪಾಯಿಂಟ್. ಅಮೃತ ವರ್ಷಿಣಿ ಎಂದೊಡನೆ ಹಾಡುಗಳು ಮತ್ತು ಈ ಮೂರು ನಟರ...

Beladingala Bale ಅಂದಿಗೂ ಇಂದಿಗೂ II The Best Classic Love Story Ever Made in Sandalwood

ಇಮೇಜ್
 ಬೆಳದಿಂಗಳ ಬಾಲೆ, ೧೯೯೫ ರಲ್ಲಿ ಬಿಡುಗಡೆ ಆದ ಯಂಡಮೂರಿ ವೀರೇಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ. ಕನ್ನಡ ಡಾ ಯಶಸ್ವಿ ನಿರ್ದೇಶಕ  ಸುನಿಲ್ ಕುಮಾರ್ ದೇಸಾಯಿ ಬತ್ತಳಿಕೆಯಿಂದ ಬಂಡ ಈ ಸಿನಿಮಾ ೯೦ ರ ದಶಕದ ಅತೀ ಜನಪ್ರಿಯ ಚಿತ್ರಗಳಲ್ಲೊಂದಾಗಿತ್ತು , ಚೆಸ್ ಗ್ರಾಂಡ್ ,ಮಾಸ್ಟರ್ ರೇವಂತ್ ಮತ್ತು ಅನಾಮಿಕ ಹುಡುಗಿಯ ನಡುವಿನ ಒಗಟು,ಪ್ರಶ್ನೆ, ಉತ್ತರ, ಹುಡುಕಾಟದ ಏರಿಳಿತವೇ ಬೆಳದಿಂಗಳ ಬಾಲೆ.  ಕನ್ನಡ ಸಿನಿಮಾ ಇತಿಹಾಸದಲ್ಲೇ  ಅತೀ ಅಪರೂಪದ ನಿರೂಪಣೆ ಒಳಗೊಂಡ ನೋಡುವ ಪ್ರೇಕ್ಷಕರಲ್ಲಿ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸಿತ್ತು. ಸಿನಿಮಾ ಡಾ ಕಡೆಯ ದೃಶ್ಯದವರೆಗೂ ಬೆಳದಿಂಗಳ ಬಾಲೆಯನ್ನ ಗುಪ್ತವಾಗಿಡುತ್ತ ನಾಯಕ ನ ಒದ್ದಾಟ ಮತ್ತು ಹುಡುಕಾಟಗಳೊಡನೆ ಪ್ರೇಕ್ಷಕರಿಗೆ ಹೊಸ ತೆರನಾದ ಅನುಭವ ನೀಡಿದ್ದ ಚಿತ್ರ, ಚಿತ್ರದ ಹಿನ್ನೆಲೆ ಸಂಗೀತ ಬೆಳದಿಂಗಳ ಬಾಲೆ ಗೆ ಪ್ಲಸ್ ಪಾಯಿಂಟ್ ಬೆಳದಿಂಗಳ ಬಾಲೆ ಗೆ ವಾಯ್ಸ್ ಕೊಟ್ಟ ಮಂಜುಳಾ ಗುರುರಾಜ್ ಗೆ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು..ಈ ಸಿನಿಮಾ ಗೆ ದಕ್ಕಿದ ಗೌರವ ಮತ್ತು ಪ್ರಶಸ್ತಿಗಳೆಷ್ಟೋ. ಬೆಳದಿಂಗಳ ಬಾಲೆ ಚಿತ್ರಕ್ಕೆ ಈಗ ಪೂರ್ತಿ ೨೫ ವರ್ಷ ಈಗಲೂ ನೋಡುಗ ಪ್ರೇಕ್ಷಕರಿಗೆ ಅದೇ ಅನುಭವ ಕೊಡುತ್ತದೆ.ಬೆಳದಿಂಗಳ ಬಾಲೆ  ೯೦ ರ ದಶಕದ ಜನರೇಶನ್ ನ ಆಲ್ ಟೈಮ್  ಫೇವರಿಟ್ ಅಂದು -ಇಂದಿಗೂ. ಅಂದಿಗೂ ಇಂದಿಗೂ - Forever and today, Beladingala Baale is a Kannada movie released on...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

ಇಮೇಜ್
 ಚಾಲೆಂಜಿಂಗ್ ಸ್ಟಾರ್ ದರ್ಶನ , ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್. ಇಲ್ಲಿವರೆಗೂ ೫೩ ಸಿನಿಮಾಗಳನ್ನ ಕೊಟ್ಟಿರೋ ದರ್ಶನ ರ ಸಿನಿಮಾ ಜರ್ನಿ ಯಲ್ಲಿ  ಎಷ್ಟೋ ಸೂಪರ್ ಹಿಟ್ ಸಿನಿಮಾ ಗಳಿವೆ, ಬ್ಲಾಕ್ ಬಸ್ಟರ್ ಮತ್ತು ಫ್ಲಾಪ್ ಗಳಿವೆ ಆದರೆ ದರ್ಶನ್ ಕೆರಿಯರ್ ನ ಮೊದಲ ಫ್ಲಾಪ್ ಮತ್ತು ಮೊದಲ  ಬ್ಲಾಕ್ ಬಸ್ಟರ್ ಯಾವ್ದು. ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ದರ್ಶನ ಆಗಿನ ಯುವ ಪೀಳಿಗೆಯ ನಟರಲ್ಲಿ ಅತ್ಯಂತ ಭರವಸೆ ಮೂಡಿಸಿದ್ದರು. ಮೆಜೆಸ್ಟಿಕ್ ಚಿತ್ರದಲ್ಲಿನ ನಟನೆ ಅಭಿಮಾನಿ ಬಳಗವನ್ನ ಹುಟ್ಟು ಹಾಕಿತ್ತು ಆದರೆ  " ನಿನಗೋಸ್ಕರ " ದರ್ಶನ ಕೆರಿಯರ್ ನ ಮೊದಲ ಫ್ಲಾಪ್ ಸಿನಿಮಾ ಆಗಿತ್ತು  , ಈ  ಚಿತ್ರ ಫ್ಲಾಪ್ ಆದಾಗ ಗಾಂಧಿನಗರದಲ್ಲಿ ನಕ್ಕು ಗುಸು ಗುಸು ಮಾತಾಡಿದವರೇ ಹೆಚ್ಚು. ಆಗ ಜೋಗಿ ಪ್ರೇಮ್ ನಿರ್ದೇಶನದ "ಕರಿಯ" ಚಿತ್ರದ ಮೂಲಕ ತಾನು ಮತ್ತೆ ಮೈ ಕೊಡವಿ ಎದ್ದು ನಿಂತ ದರ್ಶನ, ತನ್ನದೇ ಮ್ಯಾನರಿಸಂ  ಮತ್ತು ಬಾಡಿ ಲ್ಯಾಂಗ್ವೇಜ್ ನಿಂದ ಮನೆ ಮಾತಾದರು. ಕರಿಯ ದರ್ಶನ ರ ಸಿನಿಮಾ ಕೆರಿಯರ್ ನಲ್ಲಿ ಮೊದಲ ಬ್ಲಾಕ್ ಬಸ್ಟರ್ ಆಗಿದೆ. ಪುಟಾಣಿಗಳಿಂದ ಹಿಡಿದು ಮುದುಕರವರೆಗೂ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ದರ್ಶನ  ಅಲ್ಲಿಂದ ಇಲ್ಲಿವರೆಗೂ ಹಲವಾರು ಹಿಟ್ ಸೂಪರ್ ಹಿಟ್ಗಳನ್ನ ಕನ್ನಡದ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ, ಮುಂದಿನ ರಾಬರ್ಟ್ ಚಿತ್ರ ...

Naa Ninna Bidalaare ಅಂದಿಗೂ ಇಂದಿಗೂ II One of the greatest horror movie in Sandalwood.

ಇಮೇಜ್
ನಾ ನಿನ್ನ ಬಿಡಲಾರೆ ಕನ್ನಡದ ಅತಿ ಜನಪ್ರಿಯ horror ಚಿತ್ರ, ೧೯೭೯  ರಲ್ಲಿ ಬಿಡುಗಡೆ ಆದ ಈ ಚಿತ್ರ ಆ ವರ್ಷದ ಅತೀ ಹೆಚ್ಚು ಗಳಿಕೆಯ ಏಕಾಯ್ಕ ಕನ್ನಡ ಚಿತ್ರವಾಗಿತ್ತು. ಪ್ರೇಮ ನಿರಾಕರಿಸಿದ ಪ್ರಿಯಕರನ ದೇಹದೊಳಗೆ ನೊಂದ  ಸತ್ತ ಪ್ರೇಯಸಿ ಹೊಕ್ಕು ನಾಯಕ  ಮತ್ತು  ಅವನ  ಹೆಂಡತಿಯನ್ನ  ಪ್ರೇತವಾಗಿ  ಕಾಡುವ  ಚಿತ್ರ  . ಅನಂತ್ನಾಗ್  ಅವರ  ಅದ್ಬುತ  ನಟನೆ  ಎಷ್ಟೋ  ವರುಶಗಳವರೆಗೆ  ಮನೆ   ಮಾತಾಗಿತ್ತು , ಅಲ್ಲಿವರೆಗೂ  ಅನಂತ್ನಾಗ್  ಅವರನ್ನ  ಮೃದು  ಪಾತ್ರಗಳಲ್ಲಿ  ನೋಡಿದ್ದ  ವೀಕ್ಷಕರಿಗೆ  ಈ  ಸಿನಿಮಾ  ಅನಂತ್ನಾಗ್  ಇಂತಹ ನಟ  ಅನ್ನೋದನ್ನ  ತೋರಿಸಿತ್ತು .ಅನಂತ್ನಾಗ್  ಮತ್ತು ಲಕ್ಷ್ಮಿ ಅವರು ಜೋಡಿಯಾಗಿ ನಟಿಸಿದ ಮೊದಲ ಚಿತ್ರ ನಾ ನಿನ್ನ ಬಿಡಲಾರೆ. ಇದೆ ಜೋಡಿ ಮುಂದೆ ಭಾರತ ಚಿತ್ರ ರಂಗದಲ್ಲೇ   ಯಶಸ್ವಿ ಜೋಡಿ ಎನಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಅಪರೂಪದ ನಿರೂಪಣೆಯಿಂದ ಮತ್ತು ಸೌಂಡ್ ಎಫೆಕ್ಟ್ ನಿಂದ ಆಗಿನ ಕಾಲದಲ್ಲೇ ಈ ಸಿನಿಮಾ  ಕನ್ನಡಿಗರ ಎದೆ ಝಲ್ ಅನಿಸಿದ್ದು ಸುಳ್ಳಲ್ಲ , ಈಗಲೂ ಈ ಸಿನಿಮಾ ನೋಡುಗರಿಗೆ ಅದೇ ಅನುಭವ ನೀಡುತ್ತದೆ.ಇದೆ ಚಿತ್ರ ಮುಂದೆ ಹಿಂದಿಯಲ್ಲೂ ಮಂಗಲಸೂತ್ರ ಅನ್ನೋ ಶೀರ್ಷಿಕೆಯಿಂದ ರಿಮೇಕ್ ಆಗಿತ್ತು. ಈ  ಚಿ...