Aakasmika ಅಂದಿಗೂ ಇಂದಿಗೂ II One Of The Superhit Movie Directed By T S Nagabharana
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು, ಈ ಒಂದು ಹಾಡು ಜಗತ್ತಿನ ಮೂಲೆ ಮೂಲೆ ತಲುಪೋ ಹಾಗೆ ಮಾಡಿದ್ದು ೧೯೯೩ ರಲ್ಲಿ ಬಿಡುಗಡೆ ಆದ ವರನಟ ನಟಿಸಿ ಟಿ ಎಸ ನಾಗಾಭರಣ ನಿರ್ದೇಶಿಸಿದ ಆಕಸ್ಮಿಕ ಚಿತ್ರದ ಮೂಲಕ , ಈ ಹಾಡು ಇಂದಿಗೂ ಕನ್ನಡಿಗರ ಸ್ವಾಭಿಮಾನ ಮತ್ತು ಭಾಷಾಭಿಮಾನದ ಸಂಕೇತವಾಗೇ ಉಳಿದಿದೆ. ಖ್ಯಾತ ಕಾದಂಬರಿಕಾರ ಶ್ರೀ ತಾ ರ ಸು ಅವರ ೩ ಕಾದಂಬರಿಗಳು ಸೇರಿ ಆಗಿದ್ದೆ ಆಕಸ್ಮಿಕ . ಡಾಕ್ಟರ್ ರಾಜ್ ಕುಮಾರ್ ಗೆ ಎಂಟನೇ ಫಿಲಂ ಫೇರ್ ಅವಾರ್ಡ್ ತಂದು ಕೊಟ್ಟ ಚಿತ್ರ , ಹಲವು ವರ್ಷಗಳ ಗ್ಯಾಪ್ ನ ನಂತರ ರಾಜಕುಮಾರ್ ಈ ಚಿತ್ರದಲ್ಲಿ ನಟಿಸಿದ್ದರು ಹಾಗಾಗಿ ಈ ಚಿತ್ರ ಬಿಡುಗಡೆ ಆಗಿ ಯಶಸ್ವೀ ೨೫ ವಾರಗಳನ್ನ ಪೂರಯ್ಸಿತ್ತು , ಆ ವಯಸ್ಸಿನಲ್ಲೂ ಅಭಿಮಾನಿಗಳಿಗೆ ರಂಜಿಸಿ ರಸದೌತಣ ನೀಡಿದ್ದ ದ್ರ್ ರಾಜ್ಕುಮಾರ್ ಅಭಿನಯ ಎಲ್ಲರನ್ನ ಮಂತ್ರ ಮುಗ್ದರಾಗಿಸಿತ್ತು , ಚಿತ್ರದ ಕಥೆ ಮತ್ತು ಚಿತ್ರ ಕಥೆ ಕೂಡ ನೋಡುಗನನ್ನ ಪ್ರತಿ ಪಾತ್ರಗಳೊಡನೆ ಬೆಸೆಯೋ ಹಾಗೆ ಮಾಡಿತ್ತು , ಅಂದು ಮಕ್ಕುಳು ದೊಡ್ಡವರೆನ್ನದೆ ಸಾಗರೋಪಾದಿಯಲ್ಲಿ ಜನ ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟದ್ದು ಯಾರೋ ಮರೆಯೋಲ್ಲ , ಹಂಸಲೇಖ ಸಂಗೀತ ಸಂಯೋಜನೆಯಎಲ್ಲ ಹಾಡುಗಳು ಚಿತ್ರದ ವೇಗಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. "ಆಗುಂಬೆಯ ಪ್ರೇಮ ಸಂಜೆ ಯಾ" ಹಾಡು ಅಂದಿನ ಯುವ ಪ್ರೇಮಿಗಳ ಅಚ್ಚು ಮೆಚ್ಚು . ಚಿತ್ರದ ಎಲ್ಲ ೫ ಹಾಡು...